ಸೋಮವಾರ, ಅಕ್ಟೋಬರ್ 19, 2026·ತುಮಕೂರು 28°

ತುಮಕೂರು ಲೈವ್ ಬ್ರೀಫ್ · ಪ್ರತಿದಿನ ಬೆಳಿಗ್ಗೆ 7ಕ್ಕೆ

ಅ.11ರಿಂದ 21ರವರೆಗೆ ತುಮಕೂರು ದಸರಾ; ಹೆಲಿಕಾಪ್ಟರ್ ರೈಡ್, ಡ್ರೋನ್ ಶೋ, ಲೈಟ್ ಅಂಡ್ ಸೌಂಡ್ ಫೌಂಟನ್‌ಗೆ ಸಿದ್ಧತೆ

ತುಮಕೂರು ದಸರಾ 2026ಕ್ಕೆ ದಿನಾಂಕ ನಿಗದಿಯಾಗಿದೆ. ಅಕ್ಟೋಬರ್ 11ರಿಂದ 21ರವರೆಗೆ ಉತ್ಸವ ನಡೆಯಲಿದ್ದು ಹಲವು ಪ್ರಮುಖ ಆಕರ್ಷಣೆಗಳಿಗೆ ಸಿದ್ಧತೆ ನಡೆದಿದೆ.

ವರದಿ · ತುಮಕೂರು ಬ್ಯೂರೋಪ್ರಕಟಣೆ 9 ಸೆಪ್ಟೆಂ 2026, 12:31 AM ISTನವೀಕರಣ 30 ಸೆಪ್ಟೆಂ 2026, 7:53 AM IST3 ನಿಮಿಷ ಓದು
EnglishWhatsAppFacebookXTelegramಅಕ್ಷರ ಗಾತ್ರ
ತುಮಕೂರು ದಸರಾ 2026

ತುಮಕೂರು: ಕಲ್ಪತರು ನಾಡಿನ ಬಹುನಿರೀಕ್ಷಿತ ತುಮಕೂರು ದಸರಾ–2026ಕ್ಕೆ ದಿನಾಂಕ ನಿಗದಿಯಾಗಿದೆ. ಅಕ್ಟೋಬರ್ 11ರಿಂದ 21ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಮತ್ತು ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲು ಸಿದ್ಧತೆ ನಡೆದಿದೆ.

ಉಪಮುಖ್ಯಮಂತ್ರಿ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ಬಾರಿಯ ದಸರಾವನ್ನು ಇನ್ನಷ್ಟು ವೈಭವಯುತವಾಗಿ ನಡೆಸುವ ಕುರಿತು ಚರ್ಚಿಸಲಾಗಿದೆ.

ಸೆಪ್ಟೆಂಬರ್ 15ಕ್ಕೆ ಲಾಂಛನ ಬಿಡುಗಡೆ

ತುಮಕೂರು ದಸರಾ–2026ರ ಅಧಿಕೃತ ಲಾಂಛನವನ್ನು ಸೆಪ್ಟೆಂಬರ್ 15ರಂದು ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ.

ಹೆಲಿಕಾಪ್ಟರ್ ರೈಡ್, ಡ್ರೋನ್ ಶೋ ಯೋಜನೆ

ಸಾರ್ವಜನಿಕರಿಗೆ ಹೆಲಿಕಾಪ್ಟರ್ ರೈಡ್, ಪಂಜಿನ ಕವಾಯತು, ಫಲಪುಷ್ಪ ಪ್ರದರ್ಶನ, ವಸ್ತುಪ್ರದರ್ಶನ, ಯುವ ದಸರಾ, ಮಹಿಳಾ ದಸರಾ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ರೂಪುರೇಷೆ ಸಿದ್ಧವಾಗುತ್ತಿದೆ. ಡ್ರೋನ್ ಶೋ ನಡೆಸುವ ಪ್ರಯತ್ನವೂ ನಡೆದಿದೆ.

ಅಮಾನಿಕೆರೆಯಲ್ಲಿ Light & Sound Fountain

ಅಮಾನಿಕೆರೆಯಲ್ಲಿ ಶಾಶ್ವತ ಬೃಹತ್ Light & Sound Fountain ಅಭಿವೃದ್ಧಿಪಡಿಸುವ ಪ್ರಸ್ತಾವನೆಯೂ ಚರ್ಚೆಯಲ್ಲಿದೆ. ನಗರದ ಪ್ರಮುಖ ಪ್ರದೇಶಗಳಲ್ಲಿ ದೀಪಾಲಂಕಾರ ಹಾಗೂ ಅದನ್ನು ವೀಕ್ಷಿಸಲು ಉಚಿತ ಬಸ್ ವ್ಯವಸ್ಥೆ ಕಲ್ಪಿಸುವ ಯೋಜನೆಯೂ ಇದೆ.

ಸ್ಥಳೀಯ ಕಲಾವಿದರಿಗೆ ಆದ್ಯತೆ

ಜಿಲ್ಲೆಯ ಸ್ಥಳೀಯ ಕಲಾವಿದರು, ಯುವಜನರು ಮತ್ತು ಮಕ್ಕಳ ಪ್ರತಿಭೆಗೆ ಹೆಚ್ಚಿನ ವೇದಿಕೆ ಕಲ್ಪಿಸುವ ಗುರಿ ಹೊಂದಲಾಗಿದೆ. ಕಳೆದ ವರ್ಷ 5,343 ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಲಾಗಿತ್ತು ಎಂದು ಪರಮೇಶ್ವರ್ ತಿಳಿಸಿದ್ದಾರೆ.

Tumakuru Live Update: ಸಂಪೂರ್ಣ ಅಧಿಕೃತ ವೇಳಾಪಟ್ಟಿ ಹಾಗೂ ಕಲಾವಿದರ ಕಾರ್ಯಕ್ರಮಗಳ ವಿವರಗಳು ಪ್ರಕಟವಾದಂತೆ ಈ ವರದಿಯನ್ನು ನವೀಕರಿಸಲಾಗುವುದು.

ಸಂಬಂಧಿತ ಸುದ್ದಿ

ಅಭಿವೃದ್ಧಿ

ಮೊದಲ ಬಾರಿಗೆ ಕಕ್ಷೆ ಸೇರಿದ ಸ್ಪೇಸ್‌ಎಕ್ಸ್ ಸ್ಟಾರ್‌ಶಿಪ್: 26 ಸ್ಟಾರ್‌ಲಿಂಕ್ ಉಪಗ್ರಹಗಳ ಯಶಸ್ವಿ ನಿಯೋಜನೆ

ಎತ್ತಿನಹೊಳೆ ಯೋಜನೆ ಟ್ರಯಲ್ ರನ್ — ತುಮಕೂರಿನತ್ತ ನೀರು ಹರಿಸುವ ಪ್ರಾಯೋಗಿಕ ಪರೀಕ್ಷೆ

ವಿವರಣೆ

ಎತ್ತಿನಹೊಳೆ ಯೋಜನೆಗೆ ಅಕ್ಟೋಬರ್ ಅಂತ್ಯದಲ್ಲಿ ಟ್ರಯಲ್ ರನ್: ತುಮಕೂರಿನತ್ತ ಸಂಗ್ರಹಿತ ನೀರು ಹರಿಸಿ ವ್ಯವಸ್ಥೆಯ ಪರೀಕ್ಷೆ

ಅಭಿವೃದ್ಧಿ

ತುಮಕೂರಿನ ಎಲ್ಲಾ 10 ತಾಲೂಕುಗಳು ಬರಪೀಡಿತ: ಕುಡಿಯುವ ನೀರಿನ ಸಮಸ್ಯೆಗೆ ಟ್ಯಾಂಕರ್, ಖಾಸಗಿ ಬೋರ್‌ವೆಲ್ ಮೊರೆ

ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್

ರಾಜಕೀಯ

ಹಳೇ ಪಿಂಚಣಿ ಯೋಜನೆ ಜಾರಿಗೆ ಶೀಘ್ರ ಆದೇಶ: ತುಮಕೂರಿನಲ್ಲಿ ಡಿಸಿಎಂ ಡಾ. ಜಿ. ಪರಮೇಶ್ವರ್ ಮಹತ್ವದ ಘೋಷಣೆ

ಬ್ರೇಕಿಂಗ್ ಅಲರ್ಟ್ ಪಡೆಯಿರಿ